ಜೀವನ ಸಂಗೀತ ವಾದ್ಯದಂತೆ, ಸುಮಧುರವೋ ಅಥವಾ ಕರ್ಕಶವೋ ಅದು ಅದನ್ನು ನುಡಿಸುವವನ ಮೇಲೆ ಅವಲಂಬಿಸಿರುತ್ತದೆ. ಕೆಲವೊಂದು ವಾದ್ಯಗಳಿಗೆ ಬೆರಳುಗಳ ಸ್ಥಿರತೆಯ ಅವಶ್ಯಕತೆಯಿದ್ದರೆ, ಕೆಲವೊಂದಕ್ಕೆ ಬೆರಳುಗಳ ಕೌಶಲ್ಯತೆ. ಕೆಲವೊಂದನ್ನು ಬಾರಿಸಬೇಕು, ಮತ್ತೂ ಹಲವನ್ನು ಊದಬೇಕು. ಪ್ರತಿಯೊಂದರ ಸಂಗೀತವೂ ವಿಶಿಷ್ಟ, ಕೆಲವೊಂದು ತುಂಬಾ ವಿಭಿನ್ನ ಕೂಡ. ಕೆಲವೊಂದು ಬರೀ ಪಕ್ಕವಾದ್ಯವಾಗಿ ಮಾತ್ರ ವಿನ್ಯಾಸ ಮಾಡಲಾಗಿರುತ್ತದೆ. ಕೆಲವೊಂದು ಪ್ರಸಿದ್ಧ, ಕೆಲವೊಂದು ಜನಪ್ರಿಯ, ಮತ್ತೂ ಹಲವಾರು ಅಜ್ಞಾತ.

ಒಬ್ಬ ನುರಿತ ವಾದ್ಯಗಾರನ ಕೈಯಲ್ಲಿ ವಾದ್ಯಗಳು ಜೀವಂತವಾಗುತ್ತವೆ. ಎಷ್ಟರಮಟ್ಟಿಗೆಂದರೆ ವಾದ್ಯವನ್ನು ಪ್ರಶಂಸಿಸುವುದೋ ಅಥವಾ ವಾದ್ಯಗಾರರನನ್ನೋ ಎಂಬುವಷ್ಟು.

ಕೆಲವೊಂದು ವಾದ್ಯಗಳು ಜೀವನಕ್ಕಿಂತ ವಿಶಾಲ, ಹಾಗೂ ಹಲವು ಗುಂಡು ಸೂಜಿಗಿಂತ ಚಿಕ್ಕ; ವಾದ್ಯಗಾರ ಹಾಗೂ ಅವನ ಮನೋಧರ್ಮಕ್ಕೂ ಇದು ಅನ್ವಯಿಸುತ್ತದೆ. ಮೂಲತಃ ವಾದ್ಯಗಳಿಗೆ ಯಾವುದೇ ಅಸ್ತಿತ್ವ ಇರುವುದಿಲ್ಲ, ಅದರಿಂದ ನೀರು ಹರಿವ ಶಬ್ದವಾಗಲೀ ಅಥವಾ ಕಲ್ಲುಗಳು ಉದುರುವ ಶಬ್ದವಾಗಲೀ, ವಾದ್ಯಗಾರನು ಹೊಮ್ಮಿಸಬಲ್ಲನು. ಪ್ರತಿಯೊಂದು ವಾದ್ಯವೂ ಬಹಳ ಸೀಮಿತ ಆಯ್ಕೆ ಕೊಡುತ್ತದೆ‌ – ಒಂದೆರಡು ಕಡ್ಡಿಗಳ ಜೊತೆ ತಬಲ(drum) ಅಥವಾ ಏಳು ಸ್ವರಗಳು, ಹೀಗೆ. ಇದರಲ್ಲಿ ನೀವು ಎಷ್ಟೂ ಅಂತ ಬೇರೆಬೇರೆ ರೀತಿಯಲ್ಲಿ ನುಡಿಸುವುದು ಸಾಧ್ಯವಾಗುತ್ತದೆ. ಆದರೆ ನಮಗೆಲ್ಲಾ ಗೊತ್ತು, ವಾದ್ಯಗಾರ ಅಷ್ಟರಲ್ಲೇ ಒಂದಕ್ಕಿಂತ ಒಂದು ಒಳ್ಳೆಯ ಸ್ವರಗಳನ್ನು ನುಡಿಸುತ್ತಾನೆ ಎಂದು. ಎಂತಹ ಒಂದು ಪವಾಡ! ಅದೇ ರೀತಿ, ನೀವು ನುಡಿಸಿದಂತೆ, ನಿಮ್ಮ ಜೀವನ.

ವಾದ್ಯಗಾರ, ನಿಗೂಢವಾದ, ಮೋಡಿಗೊಳಿಸುವ, ವಿಶಿಷ್ಟ ಸ್ವರಗಳನ್ನು ಯಾವಾಗಲೂ ಹೊಮ್ಮಿಸುತ್ತಿರುತ್ತಾನೆ – ನಿಮ್ಮ ಆತ್ಮವನ್ನು ಕಲಕುವ ಸ್ವರ, ನಿಮ್ಮನ್ನು ನಗಿಸುವ ಅಥವಾ ಅಳಿಸುವಂತದ್ದು, ಈ ಮುಂಚೆ ನೀವು ಗ್ರಹಿಸಲಾಗದಿದ್ದಂತಹ ಸ್ವರಗಳು. ಅವನು ಮಾತ್ರಾ ಪ್ರಪಂಚವನ್ನು ವಿಸ್ಮಯ ಮಾಡುತ್ತಲೇ ಇರುತ್ತಾನೆ. ಮತ್ತೆ, ಹಾಗಿಲ್ಲದಿದ್ದಲ್ಲಿ, ಈಗ ಪ್ರಪಂಚದಲ್ಲಿರುವ ಲಕ್ಷಾಂತರ ಧ್ವನಿಮುದ್ರಿಕೆಗಳು ಹೇಗೆ ಉಂಟಾಯಿತು? ಮೊಜ಼ರತ್ ಅಥವಾ ಬೀಥೋವಿನ್ ನುಡಿಸಿರುವ ಎಲ್ಲಾ ಸ್ವರಗಳನ್ನು ನೀವು ನುಡಿಸಬಲ್ಲವರಾಗಿದ್ದರೆ ಅದು ಖಂಡಿತಾ ಶ್ಲಾಘನೀಯ, ಆದರೆ ಪ್ರಪಂಚ ನಿಮ್ಮನ್ನು ಪ್ರಶಂಸಿಸಲು ಅಥವಾ ಇತಿಹಾಸದಲ್ಲಿ ನೀವೊಂದು ಸ್ಥಾನ ಪಡೆದುಕೊಳ್ಳಲು ಅಷ್ಟು ಸಾಕಾಗುವುದಿಲ್ಲ.

ಅದೇ, ನೀವು ನಿಮ್ಮದೇ ಸ್ವರವನ್ನು ಈ ಮುಂಚೆ ಅದ್ಭುತ ವಾದ್ಯಗಾರರು ನುಡಿಸಿರುವ ಸ್ವರಗಳಿಗಿಂತ ಯೋಗ್ಯವಾಗಿ ಅಥವಾ ಪ್ರಮಾಣ ಸಂಖ್ಯೆಯಲ್ಲಿ ಮೀರಿಸಿದ್ದೇ ಆದರೆ, ಪ್ರಪಂಚ ನಿಮ್ಮ ಸ್ವಂತಿಕೆಗೆ ಖಂಡಿತವಾಗಿಯೂ ಗೌರವಿಸುತ್ತದೆ. ಯಾವುದೇ ಕ್ಷೇತ್ರದಲ್ಲಿ ಯಾರು ತನ್ನ ಸೃಜನಶೀಲತೆ, ಸ್ವಂತ ದೃಷ್ಟಿಕೋನ, ತತ್ವಜ್ಞಾನ ಅಥವಾ ಸ್ವಂತ ಸಿದ್ಧಾಂತವನ್ನು ನೀಡುತ್ತಾನೆ, ಅಂಥ‌ಹವರಿಂದಲೇ ಸಮಾಜ ಮುಂದುವರಿಯಲು ಸಾಧ್ಯ.

ಹೋಗಿ, ನುಡಿಸಿ! ಆದರೆ ನಿಮ್ಮ ಸ್ವಂತ ಸ್ವರವನ್ನು ನುಡಿಸಿ, ನಿಮ್ಮ ಸ್ವಂತ ಸಂಗೀತವನ್ನು ರಚಿಸಿ. ನಿಮ್ಮ ಪುಂಗಿಯನ್ನು ನೀವೇ ಊದಿಕೊಳ್ಳಬೇಡಿ. ನಿಮ್ಮ ಧ್ವನಿಗೂಡಿಸಿ. ಅಗತ್ಯವಿದ್ದರೆ ಚೆನ್ನಾಗಿ ನುಡಿಸುವ ತರಬೇತಿ ಪಡೆದುಕೊಳ್ಳಿ. ಆದರೆ ಏನನ್ನು ನುಡಿಸಬೇಕು ಎಂಬುದರ ಬಗ್ಗೆ ತರಬೇತಿ ಬೇಡ – ಆ ನಿರ್ಧಾರ ನಿಮ್ಮದೇ ಇರಲಿ. ನಿಮ್ಮಲ್ಲಿರುವ ಅತ್ಯಂತ ಸುಂದರವಾದ ಸಂಗೀತವನ್ನು ನಿಮ್ಮ ಆಂತರಿಕ ಧ್ವನಿಗೂಡಿಸಿ ನುಡಿಸಿ. ತರಬೇತಿಯ ನಂತರ, ನೀವು ಅತ್ಯಂತ ವ್ಯಾಮೋಹಕ, ಮೋಡಿಗೊಳಿಸುವ, ಸುಮಧುರವಾದ ಹಾಗೂ ಭಾವಪರವಶಗೊಳಿಸುವ ಸಂಗೀತವನ್ನು ನಿರ್ಮಾಣ ಮಾಡಬಹುದು. ಅದರಿಂದ ನಿಮ್ಮ ಆಂತರಿಕ ಧ್ವನಿ ವಿಶಿಷ್ಟವಾಗಷ್ಟೇ ಅಲ್ಲದೆ, ಗಾಢವಾಗಿ ಹಾಗೂ ಭವ್ಯವಾಗಿ ಕೇಳುವುದು.

ಬೇರೆ ಯಾರದ್ದೋ ಸ್ವರವನ್ನು ನುಡಿಸಬೇಡಿ. ನಿಮ್ಮದೇ ವಾದ್ಯ ಆರಿಸಿಕೊಳ್ಳಿ, ನಿಮ್ಮ ಸ್ವಂತ ಸ್ವರವನ್ನು ನುಡಿಸಿ. ಭವ್ಯವಾದ ಆರ್ಕೆಸ್ಟ್ರಾವನ್ನು, ಯಾವುದಕ್ಕೂ ಯಾರಿಗೂ ಕಮ್ಮಿ ಇಲ್ಲದಂತೆ ಶುಭದಾಯಕವಾದ ರೀತಿಯಲ್ಲಿ ಆಯೋಜಿಸಿ. ಇದೆಲ್ಲಕ್ಕೂ ಖಂಡಿತವಾಗಿಯೂ ಆಂತರಿಕವಾಗಿ ಮನಸ್ಸನ್ನು ಹರಿಸಬೇಕಾಗುತ್ತದೆ.

ಆದರೆ ದಯವಿಟ್ಟೂ, ಬೇರೆಯವರ ಒಳತಿಗೋಸ್ಕರ, ಸಾರ್ವಜನಿಕ ಪ್ರದರ್ಶವನ್ನು ಮಾತ್ರಾ, ಸ್ನಾನಗೃಹದಿಂದ ಹೊರ ಬರಲು ತಯಾರಾದ ಮೇಲೆ, ಸೂಕ್ತವಾದ ಬಟ್ಟೆ ಧರಿಸಿದ ನಂತರವಷ್ಟೇ ಮಾಡಿ.

ಶಾಂತಿ. 

ಸ್ವಾಮಿ

Translated from: Life is Like a Musical Instrument 

Painting inspired from (copied from 😛) https://youtu.be/fdgLTu6Ax7E